ಯಾಕೋ ನಗುತಿ ಓ ಮನುಜ ನೀ ಕಂಡವರ ಬಾಳ ನೋಡಿ ಇನ್ನೊಬ್ರ ನೀನು ಹಂಗ ಸೋಕೆ ಮುಂಚೆ ನಿನ್ ಬೆನ್ನ ನೀ ನೋಡು
ಅವರವರ ಬದುಕು ಅವರ ಕೈಯಾಗ ಅನ್ನೋದ ನೀ ತಿಳಕೋ ಇನ್ನೊಬ್ರ ಸುದ್ದಿ ಆಡೋಕೆ ಮುಂಚೆ ನಿಂದೇನಾ ನೀ ತಿಳಕೋ ಎಲುಬಿಲ್ಲ ಅಂತ ನಾಲಿಗೆಯನ್ನ ಹೋದಾಂಗ ಬಿಡಬ್ಯಾಡ ಕಣ್ಣು ಕಿವಿ ಹೇಳಿದ್ದೆಲ್ಲ ಕೇಳಿ ನೀನು ಅವರಿವರ ಬಾಳನ್ನು ಮುರಿ ಬ್ಯಾಡ
ಬೇರೆಯವರ ಮನೆಯ ದೋಸೆಯ ತೂತ ನೋಡೋಕೆ ಹೋಗಬ್ಯಾಡ ನಿನ್ ಮನಿ ಕೆಂಚ ತೂತನ್ನು ಮುಚ್ಚು ಇದನಿ ಮರಿ ಬ್ಯಾಡ ಇನ್ನೊಬ್ರ ಮನೆಯ ಹಿತ್ತಲಿನ ಬಾಗಿಲು ಸರಿ ಇಲ್ಲ ಅನ್ನಬ್ಯಾಡ ನಿಮ್ ಮಣಿ ಮುಂದಿನ ಬಾಗಿಲಿಗೆ ಅಗಣಿ ಇಲ್ಲದ್ದು ಮರಿ ಬ್ಯಾಡ
ಕಪ್ಪಾದ ಹಣ್ಣು ನೇರಳೆ ಹಣ್ಣು ತಿನ್ನೋಕೆ ರುಚಿ ಬಹಳ ಕೆಂಪಾದ ಹಣ್ಣು ಅತಿಯಾ ಹಣ್ಣು ತುಂಬೆಲ್ಲ ಹುಳು ಬಹಳ ಹಸಿದೊಟ್ಟಿ ಇರುವ ಹರಕ್ಲೊಟ್ಟೆ ಜನರ ಜರಿಯೋದು ತರವಲ್ಲ ಎಲ್ಲರಲ್ಲೂ ಹುಳುಕನ್ನು ಹುಡುಕುವ ಚಾಳಿ ಎಂದು ನೀ ಮಾಡಬ್ಯಾಡ