ಶರಣು ಶರಣು ಶರಣು ಶರಣು
ಶರಣು ಸಿದ್ದಿ ವಿನಾಯಕ
ಶರಣು ವಿದ್ಯ ಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ
ನಿತಿನ ನೇತ್ರನ ದೇವಿ ಸುತನೆ
ನಾಗಭೂಷಣ ಪ್ರಿಯನೆ
ಕಡಿತ ತಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ
ಬಟ್ಟು ಮುತ್ತಿನ ಪದಕ ಹಾರ್ವೆ
ಬಾಹು ಹಸ್ತ ಚತುಷ್ಟನೇ
ತೊಟ್ಟ ತೊಡುಗೆಯ ಹೇಮ ಕಂಕಣ
ಭಾಷಾಂಕುಶ ಧಾರನೆ
ಕುಕ್ಷಿ ಮಹಾ ಲಂಬೋದರನೇ
ಇಕ್ಷ ಚಾಪನ ಗೆಲಿದನೆ
ಪಕ್ಷಿ ವಾಹನ ಸಿರಿ ಪುರಂದರ
ವಿಠಲ ನಾ ನಿಜ ದಾಸನೇ