ನಿನ್ನ ಮಗನ ಲೂಟಿ ಘನವಮ್ಮ ಕರೆದು ರಂಗಕೆ ಬುದ್ಧಿ ವೇಳೆ ಗೋಪ್ಯಮ್ಮ
ಹಾಲು ಕಾಯುವಲ್ಲಿ ಇವನ ಘಾಳಿ ಘನವಮ್ಮ ಕಾಲು ತಂದು ಕೇಲಿನೊಳಗೆ ಅದ್ದಿ ಪೋದನಮ್ಮ ಕೋಲು ತಂದು ಹೊಯ್ಯ ಪೋದರೆ ಓಡಿ ಪೋದ ನಮ್ಮ
ಮೊಸರು ಕಡೆಯುವಲ್ಲಿ ಇವನ ಘಾಳಿ ಘನವಮ್ಮ ಶಿಶುವಿನ ಕೈಲಿ ಬೆಣ್ಣೆ ಉಳಿಗೊಡ ನಮ್ಮ ಮೊಸರು ಮಾರುವರು ಮೊರೆ ಇಡುವರಮ್ಮ ಶಿಶುಮುಕಿಯರು ಹೀಗೆ ದೂರುವರಮ್ಮ
ಊರೊಳು ಬರಲೀಸ ಕೇರಿಯಳು ಸುಳಿಯಲಿಸ ಈರೇಳು ಲೋಕಕ್ಕೆ ಒಡೆಯ ತಾನಂತೆ ಧೀರಶ್ರೀ ಪುರಂದರ ವಿಠಲ ರಾಯನ ಕೇರಿ ಬಸವನ ಮಾಡಿಬಿಟ್ಟೆ ಗೋಪ್ಯಮ್ಮ