ವೀರ ಹನುಮ ಬಹು ಪರಾಕ್ರಮ ಸುಜ್ಞಾನ ವಿತ್ತು ಪಾಲಿಸೆಮ್ಮ ಜೀವರೋತ್ತಮ
ರಾಮದೂತ ನೆನೆಸಿಕೊಂಡೆ ನೀ ರಾಕ್ಷಸರ ವನವೆಲ್ಲ ಕಿತ್ತು ಬಂದೆ ನೀ ಜಾನಕಿಗೆ ಮುದ್ರೆ ಇತ್ತು ಜಗತ್ತಿಗೆಲ್ಲ ಹರುಷವಿತ್ತು ಜಗತ್ತಿಗೆಲ್ಲ ಚೂಡಾಮಣಿಯ ರಾಮಗಿತ್ತು, ಲೋಕಕ್ಕೆ ಮುದ್ದೇನೆಸಿ ಮೆರೆವ
ಗೋಪಿಸುತನ ಪಾದ ಪೂಜಿಸಿ ಗದೆಯ ಧರಿಸಿ ಬಕಾಸುರನ ಸಂಹರಿಸಿದೆ ದ್ರೌಪದಿಯ ಮೊರೆಯ ಕೇಳಿ ಮತ್ತೆ ಕೀಚಕನ ಕೊಂದು ಭೀಮನೆಂಬ ನಾಮದರಿಸಿ ಸಂಗಮಧೀರನಾಗಿ ಜಗದಿ
ಮಧ್ಯಗೆಹನಲ್ಲಿ ಜನಿಸಿ ನೀ ಬಾಲ್ಯದಲ್ಲಿ ಮಸ್ಕರಿಯ ರೂಪ ಗೊಂಡೆ ನೀ ಸತ್ಯವತಿಯ ಸುತನ ಬಜಿಸಿ ಸಮ್ಮುಖದಿ ಭಾಷ್ಯ ಮಾಡಿ ಸಜ್ಜನರ ಪೊರೆವ ಮುದ್ದು ಪುರಂದರ ವಿಠಲನ ಪಾದ !IMG_20230327_205313.jpg