ನಮ್ಮಮ್ಮ ಶಾರದೆ ಉಮಾಮಹೇಶ್ವರಿ ನಿಮ್ಮೊಳಗಿಹ ನಾರಮ್ಮ
ಕಮ್ಮ ಗೊಲ್ಲನ ವೈರಿ ಸುತನಾದ ಸೊಂಡಿಲ ಹೆಮ್ಮೆಯ ಗಣನಾತನೇ ಕಣಮ್ಮ
ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆ ದಾಡಿವ ನ್ಯಾರಮ್ಮ ಮೂರು ಕಣ್ಣಿನ ಸುತ್ತ ಮುರಿದಿಟ್ಟ ಚಂದ್ರನ ಧೀರಥ ಗಣನಾತನೇ ಕಣಮ್ಮ
ಉಟ್ಟದಟ್ಟಿಯ ಬಿಗಿದುಟ್ಟ ಚೆಲ್ಲಣವ ದಿಟ್ಟತಾನೆ ವನ್ಯಾರಮ್ಮ ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾತನೇ ಕಣಮ್ಮ
ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಬಾ ಶಿಗ ನಿವನ್ ಯಾರಮ್ಮ ಲೇಸಾಗಿ ಜನರ ಸಲಹುವಕ್ಕಾಗಿ ನೆಲೆಯಾಗಿ ಕೇಶವದಾಸ ಕಣೆ ಅಮ್ಮಯ್ಯ