ಬಾ ಬೆನಕ ಪೂಜಿಸುವೆ ಬಾಗಿನಕೆ ಕಡುಬಿಡುವೆ ಎಡರುಗಳ ತೊಡರುಗಳ ಬಿಡಿಸಿ ಕಾಪಾಡಯ್ಯ
ವೃಷಭವಿದೆ ಸಿಂಹವಿದೆ ಇಲಿಯನೇರಿದೆ ಏಕೆ ಮನ್ವನೋರಥವನೇರಿ ಸಂಚರಿಸು ಗಣಪಯ್ಯ
ಏಕದಂತನೆ ನಿನಗೆ ಏಕ ವಿಂಶದಿ ದೂರವೆ ರಕ್ತ ಚಂದನಬೆರಿಸಿ ಭಕ್ತಿಯೊಳಗರ್ಪಿಸುವೆ
ಸೊಂಡಲಿಗೆ ತಂದೀಪೆ ಉಂಡಲಿಗೆ ಮೋದಕವ ಉಂಡು ಕರು ಣಿಸು ಎನ್ನ ಸಂದ ಭಕ್ತಿಯ ಲಿಂದು